ಈ ವಾರ ತೆರೆಗೆ `ಟಿಪಿಕಲ್ ಕೈಲಾಸ್`
Posted date: 18 Wed, Jun 2014 – 12:18:04 AM

ಶ್ರೀಕೈವಲ್ಯದೇವಿ ಕಂಬೈನ್ಸ್ ಲಾಂಛನದಲ್ಲಿ ಎನ್.ದೇವರಾಜ್ ಅರಸ್ ಹಾಗೂ ಎಸ್.ಟಿ.ಶಿವಕುಮಾರ್ ಅವರು ನಿರ್ಮಿಸಿರುವ ‘ಟಿಪಿಕಲ್ ಕೈಲಾಸ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಸೃಜನ್‌ಲೋಕೇಶ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ವೃಂದ(ಪಾವನ), ಓಂಪ್ರಕಾಶ್‌ರಾವ್, ಸುಂದರರಾಜ್, ಶ್ರೀನಿವಾಸಪ್ರಭು, ಲಕ್ಷ್ಮೀದೇವಮ್ಮ, ಆಸಿಫ಼್‌ಪರೂಕಿ, ಶ್ರೀಧರ್ ಮುಂತಾದವರಿದ್ದಾರೆ.
ಬಿ.ಎನ್ ಮಲ್ಲಿಕಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದ್ದಾರೆ. ಸೂರ್ಯ.ಎಸ್.ಕಿರಣ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನ, ಎನ್.ಕುಮಾರ್ ಕಲಾನಿರ್ದೇಶನ, ಕಲೈ, ಮದನ್-ಹರಿಣಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಯೋಗರಾಜಭಟ್, ವಿ.ನಾಗೇಂದ್ರಪ್ರಸಾದ್, ಜಯಂತಕಾಯ್ಕಿಣಿ ಹಾಗೂ ವಿ.ಮನೋಹರ್ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed